0824-2483300 /2484749

Photo Gallery

2025

ದಿನಾಂಕ 16.04.2025ನೇ ಬುಧವಾರ ಬೆಳಿಗ್ಗೆ 11:30 ಗಂಟೆಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಅಭಯಾಂಜನೇಯಸ್ವಾಮಿ, ಶ್ರೀ ಪ್ರಸನ್ನ ಮಹಾಗಣಪತಿ ಮತ್ತು ಶ್ರೀ ಮಾತಾ ಲಲಿತಾಂಬಿಕಾ ದೇವಾಲಯದ ಕುಂಭಾಭಿಷೇಕ ಮಹೋತ್ಸವ ಲೋಕಾರ್ಪಣೆ ಮತ್ತು ಭಕ್ತಸಮಾಗಮ  ಸ್ವಸ್ಥಿ ವಿದ್ಯಾರ್ಥಿನಿ ನಿಲಯದ ಉದ್ಘಾಟನೆ ಸಮಾರಂಭದಲ್ಲಿ  *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಶಾಖಾ ಮಠಗಳ ಸ್ವಾಮೀಜಿಗಳವರು, *ಸನ್ಮಾನ್ಯ ಶ್ರೀ ಹೆಚ್. ಡಿ. ದೇವೇಗೌಡರು ಮಾಜಿ ಪ್ರಧಾನಮಂತ್ರಿಗಳು*, ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಂಜಾವಧೂತ ಮಹಾಸ್ವಾಮೀಜಿರವರು ಪೀಠಾಧ್ಯಕ್ಷರು, ಸ್ಪಟಿಕಪುರಿ ಮಹಾಸಂಸ್ಥಾನ ಮಠ, ಪಟ್ಟನಾಯಕನಹಳ್ಳಿ, ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವರುದ್ರ ಮಹಾಸ್ವಾಮೀಜಿರವರು, ಬೇಲಿಮಠ ಮಹಾಸಂಸ್ಥಾನ, ಸನ್ಮಾನ್ಯ ಕುಮಾರಿ ಶೋಭ ಕರಂದ್ಲಾಜೆರವರು, ಸಚಿವರು, ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ, ಭಾರತ ಸರ್ಕಾರ,  ಸನ್ಮಾನ್ಯ ಶ್ರೀ ವಿ. ಸೋಮಣ್ಣರವರು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರು, ಭಾರತ ಸರ್ಕಾರ, ಸನ್ಮಾನ್ಯ ಡಾ.ಕೆ ಸುಧಾಕರ್ ರವರು, ಲೋಕಸಭಾ ಸದಸ್ಯರು, ಚಿಕ್ಕಬಳ್ಳಾಪುರ, ಸನ್ಮಾನ್ಯ ಶ್ರೀ ಸಿ.ಎನ್ ಅಶ್ವತ್ ನಾರಾಯಣರವರು ಮಾಜಿ ಉಪಮುಖ್ಯಮಂತ್ರಿಗಳು ಶಾಸಕರು, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ, ಸನ್ಮಾನ್ಯ ಶ್ರೀ ಕೆ. ಗೋಪಾಲಯ್ಯರವರು ಮಾಜಿ ಸಚಿವರು, ಹಾಲಿ ಶಾಸಕರು, ಮಹಾಲಕ್ಷ್ಮಿ ಪುರಂ, ಸನ್ಮಾನ್ಯ ಶ್ರೀ ವಿಶ್ವನಾಥ್ ಅವರು ಯಲಹಂಕ ವಿಧಾನಸಭಾ ಕ್ಷೇತ್ರ, ಗಣ್ಯರು ಹಾಗೂ ಶ್ರೀ ಮಠದ ಸದ್ಭಕ್ತರು  ಉಪಸ್ಥಿತರಿದ್ದರು.


ದಿನಾಂಕ 15.04.2025ನೇ ಮಂಗಳವಾರ ಬೆಳಿಗ್ಗೆ 11:30 ಗಂಟೆಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಅಭಯಾಂಜನೇಯಸ್ವಾಮಿ, ಶ್ರೀ ಪ್ರಸನ್ನ ಮಹಾಗಣಪತಿ ಮತ್ತು ಶ್ರೀ ಮಾತಾ ಲಲಿತಾಂಬಿಕಾ ದೇವಾಲಯದ ಕುಂಭಾಭಿಷೇಕ ಮಹೋತ್ಸವ ಮತ್ತು ಲೋಕಾರ್ಪಣಾ ಸಮಾರಂಭದ ಪ್ರಯುಕ್ತ  ಶ್ರೀ ಮಾತಾ ಲಲಿತ ಸಹಸ್ರನಾಮ ಪಾರಾಯಣ ಮತ್ತು ಸತ್ಸಂಗ ಪ್ರವಚನ ಮತ್ತು ಧಾರ್ಮಿಕ ಸಭೆಯ ಕಾರ್ಯಕ್ರಮದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಶಾಖಾ ಮಠಗಳ ಪೂಜ್ಯ ಸ್ವಾಮೀಜಿಗಳವರು, *ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್‌ರವರು, ಉಪಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ*, ಸನ್ಮಾನ್ಯ ಶ್ರೀ ಡಿ. ವಿ. ಸದಾನಂದಗೌಡರು ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಕೇಂದ್ರ ಸಚಿವರು, ಸನ್ಮಾನ್ಯ ಶ್ರೀ ಕೆ. ಗೋಪಾಲಯ್ಯರವರು ಮಾಜಿ ಸಚಿವರು, ಶಾಸಕರು, ಮಹಾಲಕ್ಷ್ಮಿ ಪುರಂ, ಬೆಂ.,  ಸನ್ಮಾನ್ಯ ಶ್ರೀಮತಿ ಹೇಮಲತಾ ಗೋಪಾಲಯ್ಯರವರು, ಮಾಜಿ ಉಪಮಹಾಪೌರರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಶ್ರೀಮತಿ ಕುಸುಮಾ ಹನುಮಂತರಾಯಪ್ಪರವರು, ಗಣ್ಯರು ಹಾಗೂ ಶ್ರೀ ಮಠದ ಸದ್ಭಕ್ತರು  ಉಪಸ್ಥಿತರಿದ್ದರು.


ಮಂಗಳೂರಿನ ಬಾವುಟಗಡ್ಡೆಯಲ್ಲಿ ಇರುವ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯ ಮುಂಭಾಗದಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಂಗಳೂರುಶಾಖಾ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹಾಗೂ ಸನ್ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡುರಾವ್ , ಶಾಸಕರಾದ  ವೇದವ್ಯಾಸ ಕಾಮತ್ , ವಿಧಾನ ಪರಿಷತ್ ಸದಸ್ಯರಾದ ಮಂಜನಾಥ ಭಂಡಾರಿ ಹಾಗೂ ವಿವಿಧಸಂಘ ಸಂಸ್ಥೆಯ ಅಧ್ಯಕ್ಷರುಗಳು ರಾಷ್ಟ್ರಾಭಿಮಾನಿಗಳು ಭಾಗವಹಿಸಿದ್ದರು.


ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಾತ್ರಾ ಮಹೋತ್ಸವ - 2025* (ದಿನಾಂಕ 07.03.2025ರಿಂದ 15.03.2025 ರವರೆಗೆ) 
ದಿನಾಂಕ 14.03.2025 ಶುಕ್ರವಾರ ಬೆಳಿಗ್ಗೆ 4:00 ಗಂಟೆಗೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ *ಗಂಗಾಧರೇಶ್ವರಸ್ವಾಮಿ ಮಹಾರಥೋತ್ಸವ ಹಾಗೂ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಅಡ್ಡಪಾಲಕಿ ಉತ್ಸವ* ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.


ಕಾವೂರು ಶ್ರೀ ಮಹಾಲಿಂಗೇಶ್ವರ  ದೇವಸ್ಥಾನದ ಅಷ್ಟ ಬಂಧ ಬ್ರಹ್ಮಕಲಶೋತ್ಸವದ  ಧಾರ್ಮಿಕ ಸಭೆಯ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರು 8 -3-25 ರಂದು ಸಂಜೆ ಭಾಗವಹಿಸಿ ಆಶಿರ್ವಚನ ನೀಡಿದರು. ವೇದಿಕೆಯಲ್ಲಿ ಗಣ್ಯರಾದ ಶ್ರೀ ಅಜಿತಕುಮಾರ ರೈ ಮಾಲಾಡಿ ಸಹಿತ ಅನೇಕ ಗಣ್ಯರು ಭಾಗವಹಿಸಿದ್ದರು.


ದಿನಾಂಕ 28.02.2025 ಶುಕ್ರವಾರ ಬೆಳಿಗ್ಗೆ 09:30 ಗಂಟೆಗೆ *ಹೊನ್ನಾವರ ತಾಲ್ಲೂಕಿನ ಕೆಳಗಿನೂರು ಹೊನ್ನಾವರ ತಾಲ್ಲೂಕು ಒಕ್ಕಲಿಗರಸಂಘದ ಆವರಣದಲ್ಲಿ* ಆಯೋಜಿಸಲಾಗಿದ್ದ ಒಕ್ಕಲು ಉತ್ಸವ ಕಾರ್ಯಕ್ರಮದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರ* ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.  ಈ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಎಲ್ಲಾ ಶಾಖೆಯ ಪೂಜ್ಯರುಗಳು  ಮತ್ತು ಬ್ರಹ್ಮಚಾರಿಗಳು, *ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಂಕಳಾ ಎಸ್ ವೈದ್ಯ ಅವರು*, ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಶ್ರೀ ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು, ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ದಿನಕರ ಕೆ.ಶೆಟ್ಟಿ ಅವರು , ಶಿರಸಿ ಸಿದ್ದಾಪುರ ವಿಧಾನಸಭಾ ಶಾಸಕರಾದ ಶ್ರೀ ಭಿಮಣ್ಣ ನಾಯ್ಕ ಅವರು, ಚುಂಚಾದ್ರಿ ಮಹಿಳಾ ಪ್ರತಿಷ್ಠಾನ ಅಧ್ಯಕ್ಷರಾದ ಶ್ರೀಮತಿ ಭಾರತಿಶಂಕರ ಅವರು, ಹೊನ್ನಾವರ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ  ತಿಮ್ಮಪ್ಪ ಜಿ. ಗೌಡ ಅವರು,  ಗಣ್ಯರು, ರಾಜ್ಯ ಒಕ್ಕಲಿಗರ ಸಂಘದ , ನಿರ್ದೇಶಕರಗಳು, ಸುತ್ತಮುತ್ತಿನ ಗ್ರಾಮಸ್ಥರು, ಶ್ರೀ ಮಠದ ಸದ್ಭಕ್ತರು, ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ  ಬಿಜಿಎಸ್ ರೈತರತ್ನ  ಪ್ರಶಸ್ತಿ, ಶ್ರೀ ಗಣಪಯ್ಯ ಕೆ.ಗೌಡ ಅವರು, ಸಮುದಾಯ ಭವನದ ನಿರ್ವಾಹಕರಾದ ಕಿರಣ ಮಂಜುಗೌಡ ಮುಗಳಿ ಅವರು, ಶ್ರೀ ಮತಿ ಮಾದವಿ ವಿಷ್ಟುಗೌಡ ಅವರು, ದೇವಿ ಕೇಶ ಗೌಡ ಸಿಂಧೂರು ಅವರು, ಮಂಜುನಾಥ ಮಂಜು ಗೌಡ ಮಾಳಕೋಡ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿ ಆಶೀರ್ವದಿಸಿದರು.


ದಿನಾಂಕ 26.02.2025 ಬುಧುವಾರ ಸಂಜೆ 07.30 ಗಂಟೆಗೆ  ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಇಂದು *ಮಹಾಶಿವರಾತ್ರಿ* ಪ್ರಯುಕ್ತ *ಸಿದ್ಧಸಿಂಹಾಸನ  ಪೂಜೆ, ಜ್ವಾಲಾಪೀಠಾರೋಹಣ  ಹಾಗೂ ಷೋಡಶೋಪಚಾರ ಪೂಜೆಯು* ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ *ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ* ಗಳವರಿಗೆ ನೆರವೇರಿದವು.

ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಎಲ್ಲಾ ಶಾಖಾ ಮಠಗಳ ಪೂಜ್ಯ ಸ್ವಾಮೀಜಿಗಳವರು,  ಶ್ರೀ ಮಠದ ಸದ್ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದು ಪರಮಪೂಜ್ಯ ಮಹಾ ಸ್ವಾಮೀಜಿಯವರ ಆಶೀರ್ವಾದ ಪಡೆದರು.

ದಕ್ಷಿಣ ಕನ್ನಡ ವಿದ್ಯಾಸಂಘ (ರಿ ) ಸುಳ್ಯದ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲೆಯ ವಿಸ್ತೃತ ಕಟ್ಟಡ ಉದ್ಘಾಟನೆಯ ಸುಸಂದರ್ಭದಲ್ಲಿ ಮಂಗಳೂರು ಶಾಖಾಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನನೀಡಿದರು . ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಡಿ . ವಿ. ಸದಾನಂದ ಗೌಡ , ಕೆ ವಿ ಜಿ ಸಂಸ್ಥೆಯ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಗೌಡ ಹಾಗೂ ದ.ಕ. ಗೌಡ ವಿದ್ಯಾಸಂಘದ ಅಧ್ಯಕ್ಷರಾದ ಶ್ರೀ ಧನಂಜಯ ಅಡಪಂಗಾಯ ಮತ್ತು ಸರ್ವಸದಶ್ಯರು ಉಪಸ್ಥಿತರಿದ್ದರು.

ಚಿತ್ರದುರ್ಗದ ಶ್ರೀ ಸದ್ಗುರು ಕಬೀರಾನಂದಾಶ್ರಮ ದಲ್ಲಿ ನಡೆದ 95 ನೇ ಶಿವರಾತ್ರಿ ಮಹೋತ್ಸವದ ಧಾರ್ಮಿಕಸಭೆಯಲ್ಲಿ ಸದ್ಗುರು ಶ್ರೀ ಶಿವಲಿಂಗನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಂಗಳೂರು ಶಾಖಾಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ , ಹಾಗೂ ಶೃಂಗೇರಿ ಶಾಖಾಮಠದ ಪೂಜ್ಯ ಶ್ರೀ ಗುಣನಾಥ ಸ್ವಾಮಿಜಿ ಆಶೀರ್ವಚನ ನೀಡಿದರು. ಚಿತ್ರದುರ್ಗದ ಶ್ರೀ ಸದ್ಗುರು ಕಬೀರಾನಂದಾಶ್ರಮ ದಲ್ಲಿ ನಡೆದ 95 ನೇ ಶಿವರಾತ್ರಿ ಮಹೋತ್ಸವದ ಧಾರ್ಮಿಕಸಭೆಯಲ್ಲಿ ಸದ್ಗುರು ಶ್ರೀ ಶಿವಲಿಂಗನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಂಗಳೂರು ಶಾಖಾಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ , ಹಾಗೂ ಶೃಂಗೇರಿ ಶಾಖಾಮಠದ ಪೂಜ್ಯ ಶ್ರೀ ಗುಣನಾಥ ಸ್ವಾಮಿಜಿ ಆಶೀರ್ವಚನ ನೀಡಿದರು.


ದಿನಾಂಕ 22.02.2025 ನೇ ಶನಿವಾರ ಬೆಳಿಗ್ಗೆ 11:30ಗಂಟೆಗೆ ಚಿಕ್ಕಬಳ್ಳಾಪುರ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಮಹಾ ಕುಂಭಾಭಿಷೇಕ ಹಾಗೂ ವಿವಿಧ ಉತ್ಸವಚರಣೆಗಳ ಪ್ರಯುಕ್ತ  ಆಯೋಜಿಸಲಾಗಿದ್ದ *ಭಕ್ತ ಸಂಗಮ* ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿರವರ 80ನೇ ಜಯಂತ್ಯುತ್ಸವ, ಮತ್ತು ಪರಮಪೂಜ್ಯ ಜಗದ್ಗುರು  ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ 12ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ಮತ್ತು ರಜತ ತುಲಾಭಾರ ಸಮಾರಂಭದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.  ಕಾರ್ಯಕ್ರಮದಲ್ಲಿ *ಮಾಜಿ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ಎಚ್ ಡಿ ದೇವೇಗೌಡ ಅವರು* ಮತ್ತು   ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು, ಮಾದಾರ ಚನ್ನಯ್ಯ ಗುರುಪೀಠ-ಚಿತ್ರದುರ್ಗ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಎಲ್ಲಾ ಶಾಖೆಯ ಪೂಜ್ಯ ಸ್ವಾಮೀಜಿಗಳವರು, ಗೌರಿಬಿದನೂರು ಶಾಸಕರಾದ ಶ್ರೀ ಕೆ ಎಚ್ ಪುಟ್ಟಸ್ವಾಮಿಗೌಡ ಅವರು, ಮಾಲೂರು ಕ್ಷೇತ್ರದ ಶಾಸಕರಾದ ಶ್ರೀ ಕೆ ವೈ ನಂಜೇಗೌಡ ಅವರು, ಶಿಡ್ಲಘಟ್ಟ ಕ್ಷೇತ್ರದ ಶಾಸಕರಾದ ಶ್ರೀ ರವಿ ಅವರು, ಶ್ರೀನಿವಾಸಪುರ ಶಾಸಕರಾದ ಶ್ರೀ ವೆಂಕಟಶಿವಾರೆಡ್ಡಿ ಅವರು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಅನಿಲ್ ಕುಮಾರ್ ಅವರು, ಸ್ಥಳೀಯ ಮುಖಂಡರು ಹಾಗೂ ಭಕ್ತ ಸಮೂಹ ಉಪಸ್ಥಿತರಿದ್ದರು.


ದಿನಾಂಕ 22.02.2025 ನೇ ಶನಿವಾರ ಬೆಳಿಗ್ಗೆ 8:00 ಗಂಟೆಗೆ *ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಚಿಕ್ಕಬಳ್ಳಾಪುರ ಶಾಖೆಯ *ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ  ಮಹಾ ಕುಂಭಾಭಿಷೇಕ*  ಮಹೋತ್ಸವ ಸಮಾರಂಭವು *ಪರಮಪೂಜ್ಯ ಮಹಾಸ್ವಾಮೀಜಿಯವರ* ದಿವ್ಯ ಸಾನಿಧ್ಯದಲ್ಲಿ ನೆರವೇರಿತು. ಮಹೋತ್ಸವ ಸಮಾರಂಭದಲ್ಲಿ *ಮಾಜಿ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ಎಚ್ ಡಿ ದೇವೇಗೌಡ ಅವರು* ಮತ್ತು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಎಲ್ಲಾ ಶಾಖೆಯ ಪೂಜ್ಯ ಸ್ವಾಮೀಜಿಗಳವರು, ಗೌರಿಬಿದನೂರು ಶಾಸಕರಾದ ಶ್ರೀ ಕೆ ಎಚ್ ಪುಟ್ಟಸ್ವಾಮಿಗೌಡ ಅವರು, ಮಾಲೂರು ಕ್ಷೇತ್ರದ ಶಾಸಕರಾದ ಶ್ರೀ ಕೆ ವೈ ನಂಜೇಗೌಡ ಅವರು, ಶಿಡ್ಲಘಟ್ಟ ಕ್ಷೇತ್ರದ ಶಾಸಕರಾದ ಶ್ರೀ ರವಿ ಅವರು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಅನಿಲ್ ಕುಮಾರ್ ಅವರು, ಸ್ಥಳೀಯ ಮುಖಂಡರು ಹಾಗೂ ಭಕ್ತ ಸಮೂಹ ಉಪಸ್ಥಿತರಿದ್ದರು.


ದಿನಾಂಕ 20.02.2025 ಗುರುವಾರ ಬೆಳಿಗ್ಗೆ 10:30 ಗಂಟೆಗೆ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ *ಪರಮಪೂಜ್ಯ ಜಗದ್ಗುರುಗಳ 12ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ಮತ್ತು ವಿಜ್ಞಾತಂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ* ದಲ್ಲಿ  ಶ್ರೀ ಆದಿಚುಂಚನಗಿರಿ  ಮಹಾಸಂಸ್ಥಾನ ಮಠದ *ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು* ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ಕಾರ್ಯಕ್ರಮದಲ್ಲಿ *ವಿಜ್ಞಾತಂ ಪ್ರಶಸ್ತಿ ಪುರಸ್ಕೃತರಾದ ಆಚಾರ್ಯ ಮಹಾಮಂಡಲೇಶ್ವರ ಜುನಾ  ಅಖಾಡ ಹರಿಹರ ಆಶ್ರಮ ಹರಿದ್ವಾರ, ಹಿಂದೂ ಧರ್ಮ ಆಚಾರ್ಯ ಸಭಾ ಅಧ್ಯಕ್ಷರಾದ *ಪರಮಪೂಜ್ಯ ಶ್ರೀ ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜ್ ಅವರು,* ಗುಜರಾತ್ ರಾಜ್ ಕೋಟ್, ವಡೋದರ್ ಅರ್ಹ ವಿದ್ಯಾ ಮಂದಿರದ ಅಧ್ಯಕ್ಷರಾದ *ಪರಮಪೂಜ್ಯ ಶ್ರೀ ಸ್ವಾಮಿ ಪರಮಾತ್ಮಾನಂದ ಸರಸ್ವತಿ ಜೀ ಯವರು,*  ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ *ಪರಮಪೂಜ್ಯ ಶ್ರೀ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಯವರು,* ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಎಲ್ಲಾ ಶಾಖೆಯ ಪೂಜ್ಯ ಸ್ವಾಮೀಜಿಗಳವರು, ಮತ್ತು ವಿರೋಧ ಪಕ್ಷದ ನಾಯಕರಾದ * ಶ್ರೀ ಆರ್.ಅಶೋಕ್ ಅವರು,* ಚಿಕ್ಕಬಳ್ಳಾಪುರ ಜಿಲ್ಲೆಯ ಸಂಸದರಾದ *ಡಾ.ಕೆ.ಸುಧಾಕರ್ ಅವರು,* ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ * ಶ್ರೀ ಶರತ್ ಬಚ್ಚೇಗೌಡ ಅವರು,* ಗಣ್ಯರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ಶ್ರೀಮಠದ ಸದ್ಭಕ್ತರು  ಉಪಸ್ಥಿತರಿದ್ದರು.


ದಿನಾಂಕ 11.02.2025ನೇ ಮಂಗಳವಾರ ಬೆಳಿಗ್ಗೆ  11:30 ಗಂಟೆಗೆ *ಮೈಸೂರು ಜಿಲ್ಲೆ, ಟಿ ನರಸೀಪುರದ ತ್ರಿವೇಣಿ ಸಂಗಮದಲ್ಲಿ  13 ನೇ ಕುಂಭಮೇಳ -2025* ರ ಸಮಾರಂಭದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.


ಮಂಗಳೂರು ಶಾಖಾ ಮಠದಲ್ಲಿ ಭಾನುವಾರ ಕಾಭೈರವ ಸ್ವಾಮಿಗೆ ವಿಶೇಷ ಪುಷ್ಪಾಲಂಕಾರ ಸೇವೆ ಪೂಜೆ



2022